ಪೊಲೀಸ್ ಇಲಾಖೆಯಲ್ಲಿ ಸುದೀರ್ಘ ಸೇವೆ ಸಲ್ಲಿಸಿ ಸೇವೆಯಿಂದ ಸ್ವ- ಇಚ್ಚಾ ನಿವೃತ್ತಿ ಹೊಂದಿದ ಶ್ರೀಮತಿ ಲಕ್ಷ್ಮೀಬಾಯಿ. ಎಲ್. ಪತ್ತೆನ್ನವರ ಮ.ಪಿ.ಎಸ್.ಐ. ರವರನ್ನು ಬೆಳಗಾವಿ ಜಿಲ್ಲಾ ಪೊಲೀಸ್ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಿ ನಿವೃತ್ತಿ ಜೀವನ ಸುಖಕರವಾಗಿರಲೆಂದು ಹಾರೈಸಿ ಬೀಳ್ಕೊಡಲಾಯಿತು.
ತಮ್ಮ ಸೇವಾ ಅವಧಿಯಲ್ಲಿ ಕರ್ತವ್ಯನಿಷ್ಠೆ, ಪ್ರಾಮಾಣಿಕತೆ ಹಾಗೂ ಜನಸೇವೆಯ ಮೂಲಕ ಇಲಾಖೆಗೆ ಸಲ್ಲಿಸಿದ ಅಮೂಲ್ಯ ಕೊಡುಗೆಯನ್ನು ಸ್ಮರಿಸಲಾಯಿತು. ಈ ಸಂದರ್ಭದಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಅವರ ಮುಂದಿನ ನಿವೃತ್ತಿ ಜೀವನವು ಸುಖ, ಶಾಂತಿ, ಆರೋಗ್ಯ ಮತ್ತು ನೆಮ್ಮದಿಯಿಂದ ಕೂಡಿರಲೆಂದು ಹಾರ್ದಿಕ ಶುಭ ಹಾರೈಸಿದರು.
ನಿವೃತ್ತಿ ಜೀವನದ ಹೊಸ ಅಧ್ಯಾಯಕ್ಕೆ ಶುಭಾಶಯಗಳು. ![]()
![]()
![]()
